I long for it, time & again...


ಹೀಗೇ ತಡವಿ, ಮೈದಡವಿ
ಮುದ್ದು ಮಾಡಿ ದಿನಗಳು
ಸೊಕ್ಕಿ ಕೊಬ್ಬಿ ಕೂತ ಗಡವ ಬೆಕ್ಕಿನಂತೆ
ಅಲ್ಲಾಡುತ್ತಿಲ್ಲ, ಅಲುಗಾಡುತ್ತಿಲ್ಲ, ಕಿವಿಗೊಡುತ್ತಿಲ್ಲ..

ಪ್ರೀತಿಯೆರೆಯುತ್ತೇನೆ; ಹಾಲಿನಂತೆ
ಮೈದಡುವುತ್ತೇನೆ: ಮೃದು ಚುಂಗಿನ ಅರಿವೆಯಂತೆ
ಆದರೂ ಕದ್ದು ಕೂರುತ್ತದೆ ಪ್ರೀತಿಯಿಂದ ದೂರ..
ಬಾಹುಗಳಿಂದ ಹರಿದೂರ..

ಏಕೆ ಹೀಗೆ ?
ಮೃದು ಅಡರುವ ಅಧರಗಳಿಗೆ,
ಆಹ್ ! ಎನ್ನಿಸುವ ನಿನ್ನ ಕಣ್ಣೆವೆಗಳಿಗೆ
ಏಕೆ ನಾನು ಸೋಲುವುದಿಲ್ಲ ?
ಏಕೆ ಈ ಸೆಟೆದೆದೆ ತಹತಹಿಸುವುದಿಲ್ಲ ?

ಇದು ದುಷ್ಟ ನಂಜು ತುಂಬಿದ ಮೌನ;
ಕಠಿಣವಾಗಿ ನಿಂತುಹೋದ ಒಂಟಿ ನಾವೆ...
ನುಣುಪಾಗಿ ಸವೆದು ಹೋದ ಮೃದು ಭಾವನೆ...

ಆದರೂ...
ನಾನು ಚಿಗುರಬೇಕು; ಪ್ರೀತಿಗಾಗಿ..
ನಾನು ಗಾಳಿಯಾಗಬೇಕು; ಮುಂಗುರುಳಿಗಾಗಿ..
ನಾನು ಹಸಿರಾಗಬೇಕು; ವಸಂತಕ್ಕಾಗಿ..

ಹಾಗಾಗಿ ಕಾಯುತ್ತೇನೆ ಹೊಸ ಒಲವಿಗಾಗಿ...
Note:
It's a poem posted in Kannada language.
If you're not able to view the post please upgrade your browser to IE v6.0/FF v1.7

It's my first attempt to post a Kannada sonnet here, which I normally write between my coffee breaks, or whenever I gulp in josh pill !, or in between my board room gathering or whenever I feel..I wanna write something. Often these're just sonnets or just a rough writeup in few lines.
The best part is, I came across this nicety link which converts English to kannada.

0 comments: